ಹೆಚ್ಚು ಒತ್ತಡದ ಕೇಂದ್ರದ ಸುತ್ತ ಕಡಿಮೆ ಒತ್ತಡವಿರುವ ಮಾರುತಕ್ಕೆ ಈ ಹೆಸರಿದೆ (ಆ್ಯಂಟಿ ಸೈಕ್ಲೋನ್). ಇದು ಎದ್ದಾಗ ಗಾಳಿ ಹೆಚ್ಚು ಒತ್ತಡದ ಕೇಂದ್ರದಿಂದ ಹೊರಭಾಗಕ್ಕೆ ಎಲ್ಲ ದಿಕ್ಕುಗಳಲ್ಲೂ ನುಗ್ಗಿ ಚದರಿ ಹೋಗುತ್ತದೆ.

ವಾಯುವಿನ ಅಪಸರಣದಿಂದಾಗಿ ಇದು ಉತ್ತರಾರ್ಧಗೋಳದಲ್ಲಿ ಪ್ರದಕ್ಷಿಣ ಗತಿಯಲ್ಲೂ ದಕ್ಷಿಣಾರ್ಧಗೋಳದಲ್ಲಿ ಅಪ್ರದಕ್ಷಿಣ ಗತಿಯಲ್ಲೂ ಬೀಸುತ್ತದೆ. ಇದು ಬೀಸಿದಾಗ ಮಳೆ ಬಾರದು. ವಾತಾವರಣ ಮೋಡರಹಿತವಾಗಿರುತ್ತದೆ. ಕಡಿಮೆ ಮೇಘದಿಂದ ಕೂಡಿದ ಮಂದಮಾರುತಗಳು ಬೀಸುವ ಸಾಧ್ಯತೆಯೂ ಉಂಟು. ಈ ಮಾರುತದ ಆಗಮನದೊಡನೆ ವಾಯುಭಾರಮಾಪಕಗಳಲ್ಲಿನ ಪಾದರಸದ ಮಟ್ಟ ಕ್ರಮವಾಗಿ ಹೆಚ್ಚುತ್ತ ಹೋಗುತ್ತದೆ.

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ